ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ರಷಾ ಗೌಡ ಮನೆಯೊಳಗಿನ ಮಂದಿಗೆ ಎಚ್ಚರಿಕೆ ನೀಡಿದ್ದರು. ಅಷ್ಟೇ ಅಲ್ಲದೇ ಜಾಹ್ನವಿ ಬಳಿ ಹೋಗಿ, ನಿಮ್ಮನ್ನು ನೀವು ಬದಲಾಯಿಸಿಕೊಂಡ್ರೆ ಮಾತ್ರ ಮುಂದುವರೆಯಲು ಸಾಧ್ಯ ಎನ್ನುವ ಎಚ್ಚರಿಕೆ ಕೂಡ ನೀಡಿದ್ದರು. ಇದನ್ನು ಕೇಳಿದ ಜಾಹ್ನವಿ ಮನೆಯಲ್ಲಿ ಕಣ್ಣೀರಿಡುತ್ತಾ ಅಶ್ವಿನಿ ಬಳಿ ನನ್ನ ಗುಂಡಿ ನಾನೇ ತೋಡಿಕೊಂಡೆನೇ ಎಂದು ಕೇಳಿದ್ದಾರೆ.



