ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರ ಹೈಡ್ರಾಮಾ ಜೋರಾಗಿಯೇ ನಡೆದಿದೆ. ರಕ್ಷಿತಾ ವಿರುದ್ಧ ಇಬ್ಬರು ನಾಲಿಗೆ ಹರಿಯ ಬಿಟ್ಟಿದ್ದು, ಇಡೀ ಕರ್ನಾಟಕದ ಜನತೆ ಇಬ್ಬರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಶ್ವಿನಿ ಗೌಡ ಮಾತಿನ ಭರದಲ್ಲಿ ರಕ್ಷಿತಾಗೆ ನೀನು ಎಲ್ಲಿಂದ ಬಂದೋಳು ಅಂತ ಗೊತ್ತು ಅಂತಾನು ಹೇಳಿದ್ದು, ಇದು ವೀಕ್ಷಕರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.



