ಶಶಿಕುಮಾರ್ ಮತ್ತು ಶ್ರುತಿ ಅಭಿನಯದ ಮುದ್ದಿನ ಮಾವ ಸಿನಿಮಾದ ದೀಪಾವಳಿ, ದೀಪಾವಳಿ ಹಾಡು ನಿಮಗೆ ಗೊತ್ತೇ ಇದೆ ಅಲ್ವಾ? ಖಂಡಿತಾ ಗೊತ್ತಿರುತ್ತೆ, ಯಾಕಂದ್ರೆ ಇದು ಕನ್ನಡದ ಜನಪ್ರಿಯ ದೀಪಾವಳಿ ಹಾಡುಗಳಲ್ಲಿ ಒಂದಾಗಿದೆ. ಈ ಹಾಡನ್ನು ಡಾ. ರಾಜಕುಮಾರ್ ಹಾಗೂ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದರು. ಆದರೆ ಈ ಹಾಡನ್ನು ಹಾಡಲು ಮೊದಲಿಗೆ ಅಣ್ಣಾವ್ರು ಒಪ್ಪಿರಲಿಲ್ಲವಂತೆ, ಆವಾಗ ಎಸ್ ಪಿ ಬಿಯವರು ಏನು ಮಾಡಿದ್ರು ಗೊತ್ತಾ?



